Thursday 30 January 2014


3

’ಇದು ಬೋಧಿಸುವ, ಮನರಂಜಿಸುವ, ಸಂಭ್ರಮಿಸುವ, ಸಡಗರಿಸುವ ನಾಡ ಹಬ್ಬ..’ – ವಿಶುಕುಮಾರ್


ಬೆಂಗಳೂರಿನಲ್ಲಿ ನಡೆಯುತ್ತಿರುವ ೬ನೆಯ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ.
ಚಿತ್ರ ಮಂದಿರಗಳು ತುಂಬಿವೆ, ಜನ ಪ್ರವೇಶ ಪತ್ರ ಸಿಕ್ಕಿಲ್ಲ ಎಂದು ನಿರಾಶರಾಗಿದ್ದಾರೆ. ಜಾಗತಿಕ ಮಟ್ಟದ ಉತ್ತಮ ಚಿತ್ರಗಳು ಸಿನಿ ಆಸಕ್ತರಿಗೆ ನೋಡಲು ಸಿಗುತ್ತಿವೆ.
ಒಂದು ಸಂಭ್ರಮದ ವಾತಾವರಣ ಥಿಯೇಟರ್ ಗಳಲ್ಲಿ ಕಾಣುತ್ತಿದೆ.
ಈ ಸಂದರ್ಭದಲ್ಲಿ ’ಅವಧಿ’ ವಾರ್ತಾ ಇಲಾಖೆಯ ನಿರ್ದೇಶಕರಾದ ವಿಶು ಕುಮಾರ್ ಅವರನ್ನು ಸಂದರ್ಶಿಸಿದಾಗ, ಅವರು ಮಾತನಾಡಿದ್ದು ಹೀಗೆ :
ಸಂದರ್ಶನ ಮತ್ತು ಫೋಟೋಗಳು : ಅಲ್ಲಾ ಬಕ್ಷಿ





ಅಂತರಾಷ್ಟ್ರಿಯ ಚಲನಚಿತ್ರೋತ್ಸವ ಯಾಕೆ ಬೇಕು ?
ಕರ್ನಾಟಕದಲ್ಲಿ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸುವುದರಿಂದ ದೇಶ ವಿದೇಶಗಳ ಅತ್ಯುತ್ತಮ ಚಿತ್ರಗಳನ್ನು ನೋಡುವ ಅವಕಾಶ ಸಿಗುತ್ತದೆ. ಚಿತ್ರ ಪ್ರೇಮಿಗಳಿಗೆ ಇದೊಂದು ಸುವರ್ಣಾವಕಾಶ. ತಾಂತ್ರಿಕವಾಗಿ, ಗುಣಮಟ್ಟದಲ್ಲಿ ನಮ್ಮ ಕನ್ನಡ ಭಾಷೆಯ ಚಿತ್ರಗಳಿಗೂ, ಜಾಗತಿಕ ಮಟ್ಟದ ಚಿತ್ರಗಳಿಗೂ ವ್ಯತ್ಯಾಸ ತಿಳಿದುಕೊಳ್ಳಬಹುದು, ನಮ್ಮ ಚಿತ್ರನಿರ್ಮಾಣವನ್ನು ಇನ್ನೂ ಹೇಗೆ ಎತ್ತರಕ್ಕೇರಿಸಬಹುದು ಎಂದು ಆಲೋಚಿಸುವ ಕ್ರಿಯೆ ಸಹ ಇಲ್ಲಿರುತ್ತದೆ. ಅಷ್ಟೇ ಇಲ್ಲ, ಅದಕ್ಕಿಂತ ಮುಖ್ಯವಾಗಿ ಇಂತಹ ಉತ್ಸವಗಳ ಮೂಲಕ ನಮ್ಮ ಕನ್ನಡ ಚಿತ್ರಗಳನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದು ಮತ್ತು ಅದರ ವ್ಯಾಪ್ತಿ ಮತ್ತು ಮಾರುಕಟ್ಟೆಯನ್ನು ವಿಸ್ತರಿಸುವುದು ಸಹ ಸಾಧ್ಯವಾಗುತ್ತದೆ.
ನಿಮ್ಮ ಪ್ರಕಾರ ಇಂತಹ ಉತ್ಸವಗಳಿಂದ ಯಾವ ಬದಲಾವಣೆಯನ್ನು ನಿರೀಕ್ಷಿಸಬಹುದು?


ಮೊದಲನೆಯದಾಗಿ ಇವುಗಳಿಂದ ಜನರಲ್ಲಿ ಒಳ್ಳೆಯ ಚಲನಚಿತ್ರಗಳ ಬಗ್ಗೆ ಒಲವು ಬೆಳೆಯುತ್ತದೆ. ಜನ ಹೆಚ್ಚು ಹೆಚ್ಚಾಗಿ ಚಿತ್ರಮಂದಿರಗಳಿಗೆ ಬರಲಾರಂಭಿಸುತ್ತಾರೆ.  ಇನ್ನು ಚಿತ್ರ ನಿರ್ಮಾಣದ ವಿವಿಧ ಹಂತಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ, ಅಂದರೆ ನಿರ್ದೇಶಕ, ತಾಂತ್ರಿಕ ವರ್ಗ ಎಲ್ಲರಿಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತಯಾರಾಗುವ, ಮೆಚ್ಚುಗೆ ಪಡೆಯುವ, ಪ್ರಶಸ್ತಿ – ಜನಮನ್ನಣೆ ಗಳಿಸುವ ಚಿತ್ರಗಳ ಬಗ್ಗೆ ತಿಳಿಯುವಂತಾಗುತ್ತದೆ. ಹೊಸ ಹೊಸ ಚಿತ್ರಗಳನ್ನು ತೆಗೆಯಲು, ಹೊಸ ಹೊಸ ಆಲೋಚನೆಗಳನ್ನು ಚಿತ್ರವಾಗಿಸಲು, ಹೊಸ ಹೊಸ ತಂತ್ರಗಳನ್ನು ಬಳಸಿಕೊಳ್ಳಲು ಇದು ಪ್ರೇರಣೆ ನೀಡುತ್ತದೆ. ಆ ಮೂಲಕ ಚಿತ್ರರಂಗದಲ್ಲಿ ಒಂದು ಗುಣಾತ್ಮಕ ಬದಲಾವಣೆಯನ್ನು ಎದುರು ನೋಡಬಹುದಾಗಿದೆ.
 ಇಂತಹ ಚಿತ್ರಗಳನ್ನು ಪ್ರದರ್ಶಿಸುವುದರಿಂದ ನಿಮ್ಮ ಅಭಿಪ್ರಾಯದಲ್ಲಿ ಕಲಾವಿದರು ಮತ್ತು ನಿರ್ದೇಶಕರಿಗೆ ಆಗುವ ಅನುಕೂಲಗಳೇನು?
ಒಂದು ಚಿತ್ರ ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಳ್ಳಬೇಕಾದರೆ, ಗುರುತಿಸಿಕೊಳ್ಳಬೇಕಾದರೆ ಅದು ಯಾವ ರೀತಿ ತಯಾರಾಗಿರಬೇಕು ಎನ್ನುವುದಕ್ಕೆ ಇಲ್ಲಿನ ಚಿತ್ರಗಳು ಒಂದು ದಿಕ್ಸೂಚಿಯ ರೀತಿಯಲ್ಲಿ ಕೆಲಸ ಮಾಡಬಲ್ಲವು ಅನ್ನಿಸುತ್ತದೆ. ಇಲ್ಲಿ ಗಮನಿಸ ಬೇಕಾದ್ದು ಕೇವಲ ಚಿತ್ರ ನಿರ್ಮಾಣ ಮಾತ್ರ ಅಲ್ಲ, ಜಾಗತಿಕ ಮಟ್ಟದಲ್ಲಿ ಅದರ ಮಾರುಕಟ್ಟೆ, ಪ್ರದರ್ಶನ ಈ ಎಲ್ಲಾ ವಿಷಯಗಳ ಬಗ್ಗೆಯೂ ಇಂತಹ ಉತ್ಸವಗಳಲ್ಲಿ ಮಾಹಿತಿ ದೊರಕುತ್ತದೆ.
ವೈಯಕ್ತಿಕವಾಗಿ ನಿಮಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಅಂದರೆ ಎನು?
ನನ್ನ ಮಟ್ಟಿಗೆ ಇದು ಬೋದಿಸುವ, ಮನರಂಜಿಸುವ, ಸಂಭ್ರಮಿಸುವ, ಸಡಗರಿಸುವ ನಾಡ ಹಬ್ಬ.
ಇಂತಹ ಚಲನಚಿತ್ರೋತ್ಸವ ಮಾಡುವದರಿಂದ ಚಿತ್ರ ಸಂಸ್ಕ್ರತಿ ಬೆಳವಣಿಗೆ ಆಗಬಹುದಾ?
ಸಂಸ್ಕ್ರತಿ ಬೆಳವಣಿಗೆ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುತ್ತವೆ, ಅದಕ್ಕೆ ಸಮಯ ಸಹ ಬೇಕು. ಇಂತಹ ಉತ್ಸವಗಳು ಒಂದು ಸಣ್ಣ ಪ್ರಮಾಣದ ಮೊದಲನೆಯ ಹೆಜ್ಜೆ ಎಂದು ಹೇಳಬಹುದು.
ಕೋನೆಯದಾಗಿ ಒಂದು ಪ್ರಶ್ನೆ, ಈ ಕಾರ್ಯಕ್ರಮಕ್ಕೆ ಎಷ್ಟು ಜನಗಳನ್ನು ನಿರಿಕ್ಷಿಸಿದ್ದಿರಿ?
ಹೀಂದಿನ ಚಿತ್ರೋತ್ಸವದಲ್ಲಿ ಸುಮಾರು ಒಂದು ಸಾವಿರದ ಐದುನೂರು ಜನ ಬಂದಿದ್ದರು. ಆದರೆ ಈ ವರ್ಷ ಎರಡು ಸಾವಿರದಿಂದ ಮೂರುಸಾವಿರ ತನಕ ಬಂದಿದ್ದಾರೆ. ಈ ವರ್ಷ ಇಷ್ಟು ಜನ ಬರ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ.  ಇನ್ನೂ ಎಷ್ಟೋ ಜನಕ್ಕೆ ಪ್ರವೇಶ ಪತ್ರ ಸಿಕ್ಕಿಲ್ಲ ಅಂತಿದಾರೆ. ನಮ್ಮ ನಿರಿಕ್ಷೆಗೂ ಮಿರಿ ಜನ ಬರುತಿದ್ದಾರೆ. ಅದು ಹೆಮ್ಮೆಯ ವಿಷಯ.  ಮುಂದಿನ ವರ್ಷ ಸಿನಿಮಾ ಬಜಾರ್ ಮಾಡುವ ಯೋಚನೆ ಇದೆ.
ಓದುಗರ ಅಭಿಪ್ರಾಯ
h a patil says:
- ಇದು ಬೋಧಿಸುವ ಮನರಂಜಿಸುವ ಮತ್ತು ಸಂಭ್ರಮಿಸುವ ನಾಡ ಹಬ್ಬ ಎಂದಿದ್ದಾರೆ ನಮ್ಮ ವಾರ್ತಾ ಇಲಾಖೆಯ ನಿರ್ದೇಶಕರು, ಚಿತ್ರೊತ್ಸವವನ್ನು ಕಡ್ಡಾಯವಾಗಿ ನೋಡಲು ನಮ್ಮ ಕನ್ನಡದ ರೀಮೇಕ್ ರಾಜರಿಗೆ ಮತ್ತು ಹೊಡೆದಾಟ ಬಡಿದಾಟ ಮರ ಸುತ್ತಗುವುದಷ್ಟೆ ಎಂದು ಬಲವಾಗಿ ನಂಬಿರುವ ನಮ್ಮ ನಟರಾಜರು ಮತ್ತು ನಟಿ ಮಣಿಗಳಿಗೆ ಹೆಳಿ, ಕನ್ನಡದಲ್ಲಿ ನೋಡಲು ಸಹನೀಯವಾದ ಚಿತ್ರಗಳು ಬರುವಂತಾದರೆ ಈ ಚಿತ್ರೋತ್ಸವ ನಡೆದದ್ದಕ್ಕೆ ಸಾರ್ಥಕ.
gavisidd hosamani says:
ಸಿನೆಮಾ ಅನ್ನುವುದು ಒಂದು ಜನಪದ ಕಲೆ ಅನ್ನುತ್ತಾರೆ ಡಾ.ಬರಗೂರು ರಾಮಚಂದ್ರಪ್ಪನವರು. ಈ ಚಿತ್ರೋತ್ಸವವನ್ನು ತಾವು ನಾಡ ಹಬ್ಬ ಎಂದು ವಾಖ್ಯಾನಿಸಿದ್ದೀರಿ. ನಾಡ ಹಬ್ಬ ಎಂದರೆ ಅದು ಜನಪದರ ಹಬ್ಬ ಅಂತಲೇ ಅರ್ಥ. ಹೀಗಾಗಿ ನಾವು ಈ ಚಿತ್ರೋತ್ಸವವನ್ನು ಜನಪದರ ಹಬ್ಬ ಎಂತಲೂ ಕರೆಯಬಹುದೇನೋ. ಇವತ್ತು ಎತ್ತೆತ್ತಲೋ ಸಾಗಿದಂತೆ ಅನ್ನಿಸುವ ನಮ್ಮ ಕನ್ನಡ ಚಿತ್ರರಂಗದ ಹಾದಿಯು ಈ ಜನಪದರ ಹಬ್ಬದ ಮೂಲಕವಾದರೂ ತುಸು ಸುಧಾರಿಸಬಹುದೇನೋ ಅಂದೆನಿಸುತ್ತದೆ.
ಈ ಚಿತ್ರೋತ್ಸವದ ಮೂಲಕ ಚಿತ್ರರಂಗದಲ್ಲಿ ಒಂದು ಗುಣಾತ್ಮಕ ಬದಲಾವಣೆಯನ್ನು ಎದುರು ನೋಡಬಹುದು ಎನ್ನುವ ನಿಮ್ಮ ಆಲೋಚನೆ ಕೂಡ ಸರಿಯಾಗಿಯೇ ಇದೆ. ಕೆಲವೇ ಕೆಲವು ಸಿನೇಮಾಗಳನ್ನು ಬಿಟ್ಟರೆ ಇವತ್ತಿನ ಬಹುತೇಕ ಸಿನೇಮಾಗಳು ಬರೀ ಮಾರುಕಟ್ಟೆಯನ್ನೇ ನಂಬಿಕೊಂಡು ಜನುಮದಾಳಿವೆ. ಇದು ಬದಲಾಗಬೇಕು. ಸಿನೇಮಾ ಅಂದರೆ ಅದು ಬರೀ ಮನರಂಜನೆ ಅನ್ನುವಂತಾಗಬಾರದು. ಸಿನೇಮಾಗೆ ಅದರದೇ ಒಂದು ಶಕ್ತಿಯಿದೆ. ಇದು ಪರಿಣಾಮಕಾರಿ ಮಾಧ್ಯಮ. ಇದು ಬರೀ ಉಳ್ಳವರ ಸೊತ್ತು ಅಂತಾಗಲೂಬಾರದು. ಬರೀ ಒಂದೇ ಪ್ರದೇಶಕ್ಕೆ ಸೀಮಿತವಾಗಬಾರದು. ಇದರಲ್ಲಿ ಎಲ್ಲರೂ ತೊಡಗುವಂತಾಗಬೇಕು.
ಬೆಂಗಳೂರಿನಲ್ಲಿ ಈಗ ನಡೆಯುತ್ತಿರುವ ಈ ಅಂತಾರಾಷ್ಟ್ರೀಯ ಚಿತ್ರೋತ್ಸವ ಉತ್ತರ ಕರ್ನಾಟಕದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಒಂದಷ್ಟು ಪ್ರದರ್ಶನ ಹಾಕಿಕೊಳ್ಳಲು ಯೋಜನೆ ಮಾಡಬಹುದೇನೋ.
ಸಿನೆಮಾ ಬಜಾರ್ ಮಾಡುವ ನಿಮ್ಮ ಆಶಯ ಕೈಗೂಡಲಿ.. ಅದು ಬುಕ್ ಬಜಾರ್ನಂತೆ ಯಶ ಕಾಣಲಿ..
-ಗವಿಸಿದ್ಧ ಹೊಸಮನಿ
mahipalreddy munnur says:
hosatanada kadege vishukumar hejje..
prayoga yashasviyaagali..
gulbargadallu e ritiya film festival aagali.. kannada sahitya parishattu nimmondige sahakaar nidalide..

No comments:

Post a Comment