Thursday 30 January 2014

      ಚಿತ್ರೋತ್ಸವದಲ್ಲಿ ಸಿಕ್ಕಿದ್ರು ಮೂಡ್ನಾಕೂಡು ಚಿನ್ನಸ್ವಾಮಿ


ಚಿತ್ರೋತ್ಸವಕ್ಕೆ ಬಂದಿದ್ದ ಮೂಡ್ನಾಕೂಡು ಚಿನ್ನಸ್ವಾಮಿ ಅವರನ್ನು 
’ಅವಧಿ’ಯ ಪ್ರತಿನಿಧಿ ಅಲ್ಲಾ ಬಕ್ಷಿ  ಸಂದರ್ಶನ ಮಾಡಿದ್ದಾರೆ. ಸಂದರ್ಶನ ಇಲ್ಲಿದೆ :
ಡಿಸೆಂಬರ್ 31
 ನೀವು ಈಗ ನೋಡಿದ ಚಿತ್ರ?
ನಾಗರಾಜ ಮಂಜುಲೆ ನಿರ್ದೇಶನದ,  ಮರಾಠಿ ಭಾಷೆಯ ಪ್ಯಾಂಡ್ರಿ.
ಚಿತ್ರದ ಬಗ್ಗೆ ನಿಮ್ಮ ಅನಿಸಿಕೆ?
ನಿಜಕ್ಕೂ ಕೂಡ ಈ ಚಿತ್ರ ತುಂಬಾ ಅರ್ಥಪೂರ್ಣವಾಗಿದೆ. ಒಂದು ಅಸ್ಪರ್ಶನ ಕುಟುಂಬದಲ್ಲಿರುವ ಜಬ್ಯ ಎಂಬ ಹುಡುಗ ತಾನು ಅಸ್ಪರ್ಶನಾಗಿ ಹುಟ್ಟಿದ್ದಕ್ಕೆ ಜೀವನದಲ್ಲಿ ಯಾವಯಾವ ಯಾತನೆಯನ್ನು ಅನುಭವಿಸುತ್ತಾನೆ ಅನ್ನುವದು ಬಹಳ ಮನೋಜ್ಞ್ವಾಗಿ ಚಿತ್ರಿತವಾಗಿದೆ. ಅವರ ಜೀವನ ಕ್ರಮ, ಸಮಾಜದಲ್ಲಿ ಜಬ್ಯನಿಗಾಗುವ ಅವಮಾನ, ಅವನು ಪ್ರಿತಿಸುವ ಶಾಲೆ ಯಲ್ಲಿ ಅವನ ಸಹಪಾಟಿಗಳು ಅವನನ್ನು ಕಾಣುವ ರೀತಿ ಜೋತೆ ಜೊತೆಗೆ ಅವರಲ್ಲಿರುವ ಗುಡಿಕೈಗಾರಿಕೆಗಳನ್ನ ಚನ್ನಾಗಿ ತೋರಿಸಿದ್ದಾರೆ. ಪಕ್ಕದಲ್ಲಿ ಶಾಲೆ ಇದ್ದರೂ ಕೋಡ ಜಬ್ಯ ಹಂದಿಯನ್ನು ಹಿಡಿಯೋದಕ್ಕೆ ಹೋಗಬೇಕಾದ ಅನಿವಾರ್ಯ. ತಂದೆ ಮಗಳ ಮದುವೆಯ ವರದಕ್ಷಿಣೆ ಕೂಡಿಸಲು ಪಡುವ ಪರಿಪಾಟಲು ಸಹ ತೊರಿಸಿದ್ದಾರೆ. ಚಿತ್ರವನ್ನು ಹಲವಾರು ಕೋನಗಳಿಂದ ಚಿತ್ರಿಸಿದ್ದಾರೆ. ಕನ್ನಡದಲ್ಲೂ ಕನ್ನಡದಲ್ಲಿ ಇಂತಹ ಸಿನಿಮಾ ಬರಲೇಬೇಕು.
ನಿಮ್ಮನ್ನು ಕಾಡಿದ ಸಿನಿಮಾ ಯಾವುದು ಸರ್?
ಕನ್ನಡದಲ್ಲಿ ಚೋಮನಗುಡಿ.
ನಿಮಗೆ ಇದೇ ಚಿತ್ರ ಯಾಕೆ ಇಷ್ಟವಾಯಿತು ?
ನಾವು ಸಮಾಜದ ಬಗ್ಗೆ ಚಿಂತನೆ ಮಾಡುವುದನ್ನು ಪ್ರೇರೇಪಿಸಿವ ಚಿತ್ರ ನನಗೆ ಇಷ್ಟ, ಈ ಚಿತ್ರದಲ್ಲಿ ಅಷ್ಟೆ ಒಬ್ಬ ಅಸ್ಪರ್ಶನಿಗಾಗುವ ನೋವುಗಳನ್ನು ಎತ್ತಿ ತೊರಿಸಿದ್ದಾರೆ. ಇಂತಹ ಚಿತ್ರಗಳು ಸಮಾಜದ ಬನದಲಾವಣೆ ತರುವಂತಹ ಚಿತ್ರಗಳು ಎಂದು ನನಗನಿಸಿದೆ.
ಅಂತರ್ರಾಷ್ಟ್ರೀಯ  ಚಿತ್ರೋತ್ಸವದ ಬಗ್ಗೆ ನಿಮ್ಮ ಅಬಿಪ್ರಾಯ?
ಇಂತಹ ಚಿತ್ರೋತ್ಸವ ಮಾಡುವದರಿಂದ ಬಹು ಬಾಷೆಯ ಚಿತ್ರಗಳನ್ನು ನೋಡಲು ಒಂದು ಸುವರ್ಣಾಕಾಶ ಸಿಗುತ್ತದೆ. ಅದರಲ್ಲೂ ಅವುಗಳಲ್ಲಿ ಅತ್ಯುತ್ತಮವೆನಿಸಿದ ಚಿತ್ರಗಳನ್ನು ಇಲ್ಲಿ ನೋಡಬಹುದು. ಸೌದಿ ಅರೆಬಿಯಾ. ಇರಾನ ಅಪಘಾನಿಸ್ತಾನ ಅಲ್ಲಿ ಯ ಜನರ ಸ್ಥಿತಿಯನ್ನು ನಾವು ಸಾದ್ಯವಾಶದಷ್ಟು ಅರಿತುಕೊಳ್ಳಬಹುದು. ಅಲ್ಲಿಯ ಸಂಸ್ಕೃತಿಯನ್ನು ಹೇಗೆ ಚಿತ್ರಿಸಿದ್ದಾರೆ ಎಂದು ನೊಡಬಹುದು. ನಮ್ಮ ಕನ್ನಡದ ನಿರ್ದೇಶಕರಿಗೆ ಇಂತಹ ಚಿತ್ರೆಗಳು ಯಾಕೆ ಸಿಗ್ತಿಲ್ಲ ಅಂತ ನನಗನಿಸಿದೆ, ಇಂತಹ ಚಿತ್ರಗಳನ್ನಾದರೂ ನೋಡಿ ಕಲಿಯಬಹುದು.

No comments:

Post a Comment