Thursday 30 January 2014

ವರದಿ:ಅಲ್ಲಾಬಕ್ಷಿ.ಎಸ್.ಎಮ್
ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದ ಮೂರನೆ ದಿನದಂದು ಲಿಡೋ ಚಿತ್ರಮಂದಿರದಲ್ಲಿ ನಿರ್ದೇಶಕ ಬಿ ಎಮ್ ಗಿರಿರಾಜು ತಮ್ಮ ಬದುಕಿನ ಬಗ್ಗೆ, ಕೆಲಸದ ಬಗ್ಗೆ, ಚಿತ್ರಗಳ ಬಗ್ಗೆ ಮಾತನಾಡುತ್ತಾ
ಹೇಳಿದ್ದು ಹೀಗೆ, ’ನನ್ನ ಹೆಂಡತಿ ಇರದಿದ್ದರೆ ನಾನು ಬಯೊತ್ಪಾದಕನಾಗುತ್ತಿದ್ದೆ, ನನ್ನ ಹೆಂಡತಿ ಸ್ಪೂರ್ತಿಯಿಂದ ನಿರ್ದೇಶಕನಾಗಿದ್ದೇನೆ’!
ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ನಿಮ್ಮ ಅಬಿಪ್ರಾಯ?
ಇಲ್ಲಿ ಚಿತ್ರೋತ್ಸವ ಆಗದಿದ್ದರೆ ಗೋವಾ ಅಥವಾ ದೆಹಲಿಗೆ ಹೊಗಬೇಕಾಗಿತ್ತು.  ಚಿತ್ರೋತ್ಸವ ಈಗ ನಮ್ಮ ಬೆಂಗಳೂರಿನಲ್ಲೇ ನಡೆಯುವದು ತುಂಬಾ ಹೆಮ್ಮೆಯ ವಿಷಯ. ಬೇರೆ ಬೇರೆ ದೇಶದ ಚಿತ್ರಗಳನ್ನು ನೋಡುವದರಿಂದ ನಿರ್ದೇಶಕರಿಗೆ ಒಂದು ಸಿನಿಮಾ ಯಾವ ತರಹ ಮಾಡಬಹುದು, ಅದಕ್ಕೆ ಎಷ್ಟೆಲ್ಲಾ ಆಯಾಮಗಳನ್ನು ಕೊಡಬಹುದು ಎಂಬುದು ತಿಳಿಯುತ್ತದೆ. ಒಂದು ವಿಷಯವನ್ನು ಜನರಿಗೆ ಯಾವ ರೀತಿಯಿಂದ ತೋರಿಸಬಹುದು ಎಂಬುದು ತಿಳಿಯುತ್ತದೆ.
ನಿಮ್ಮ ಜಟ್ಟ ಚಿತ್ರದ ಬಗ್ಗೆ ಒಂದಷ್ಟು ಮಾತು ?
ನಿಜಕ್ಕೂ ಕೂಡ ಇದು ಪ್ರತಿಯೊಬ್ಬರು ನೋಡಬೇಕಾದ ಸಿನಿಮಾ.  ಈ ಚಿತ್ರದಲ್ಲಿ ಸಂಸ್ಕ್ರತಿ ಅನ್ನುವುದರ ಅರ್ಥವನ್ನು, ಸಮಾಜದಲ್ಲಿ ಕಾಡುವ ಅನಿಷ್ಟ ಪದ್ದತಿಗಳನ್ನು ತೋರಿಸುವ ಪ್ರಯತ್ನದ ಜೊತೆಗೆ ಡಾ ಅಂಬೇಡ್ಕರ್ ಅವರ ವಿಚಾರಗಳನ್ನು ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನ ಸಹ ಆಗಿದೆ.  ಒಂದು ಬುಡಕಟ್ಟು ಜನಾಂಗದ ನಂಬಿಕೆ ಯಲ್ಲಿ ಮಹಿಳೆಗೆ ಯಾವ ಸ್ಥಾನ ಇತ್ತು ಅನ್ನುವದು ಬಹಳ ಸ್ಪಷ್ಟವಾಗಿ ಚಿತ್ರಿತವಾಗಿದೆ. ಕಿಶೋರವರು ಈ ಚಿತ್ರದಲ್ಲಿ ವಿಬಿನ್ನವಾದ ಪಾತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ನಟನೆಯ ಸಾಮರ್ಥ್ಯ ಇಲ್ಲಿ ಸಮರ್ಥವಾಗಿ ಮೂಡಿ ಬಂದಿದೆ.
ಜಟ್ಟ ಚಿತ್ರಕ್ಕೆ ಜನರಿಂದ ಇಂತಹ ಅದ್ಭುತ ಪ್ರತಿಕ್ರಿಯೆಯ ನಿರೀಕ್ಷೆ ನಿಮಗೆ ಇತ್ತಾ ಸರ್?
ಇಲ್ಲಾ.  ಚಿತ್ರ ರಿಲಿಸ್ ಆದಾಗ ಇಷ್ಟು ರಿಯಾಕ್ಷನ್ ಬರಲಿಲ್ಲ.  ಆದರೆ ಇವತ್ತು ತುಂಬಾ ಜನ ಚಿತ್ರವನ್ನು ಮೆಚ್ಚಿದ್ದಾರೆ. ಕೊನೆಗೆ ಎಷ್ಟೋ ಜನರಿಗೆ ಆಸನಗಳ ಕೊರತೆಯಿಂದ ಸ್ಥಳ ಸಿಗದೆ ಅವರು   ನೆಲದ ಮೇಲೆ ಕುಳಿತು ಸಿನಿಮಾ ನೊಡಲು ಸಿದ್ದರಿದ್ದರು. ಜಟ್ಟ ಚಿತ್ರ ನಟ ಕಿಶೋರ್ ಮತ್ತು ನಟಿ, ಚಿತ್ರದ ಇನ್ನಿತರ ನಟವರ್ಗ ಮತ್ತು ತಾಂತ್ರಿಕ ವರ್ಗದವರು ಚಿತ್ರ ನೊಡಲು ಬಂದಿದ್ದರು. ಒಟ್ಟಾರೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಜಟ್ಟ ಚಿತ್ರವನ್ನು ಮತ್ತೊಮ್ಮೆ ತೊರಿಸಲಾಯಿತು. ಚಿತ್ರವನ್ನು ನೊಡಿದ ಪ್ರೇಕ್ಷಕರು ಸುಮಾರು ಜನ ನಮಗೆ ಇಷ್ಟವಾದ ಚಿತ್ರ ಜಟ್ಟ ಎಂದರು.
ಇದು ನನ್ನ ಸಾರ್ಥಕದ ಘಳಿಗೆ.
ಓದುಗರ ಅಭಿಪ್ರಾಯ
h a patil says:
- ಜಟ್ಟ ಚಿತ್ರದ ನಿರ್ದೇಶಕ ಬಿ.ಗಿರಿರಾಜ ರವರ ಸಂದರ್ಶನ ಚೆನ್ನಾಗಿದೆ. ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡದ್ದಲ್ಲದೆ ಪ್ರೇಕ್ಷಕರ ಹೆಚ್ಳದಿಂದಾಗಿ ಮರು ಪ್ರದರ್ಶನ ಕಂಡದ್ದು ಅದೂ ಕನ್ನಡ ಚಿತ್ರಕ್ಕೆ ಈ ಮಟ್ಟದ ಮೆಚ್ಚುಗೆ, ವಿಷಯ ಓದಿ ಸಂತಸವಾಯಿತು. ಚಿತ್ರೋತ್ಸವದಲ್ಲಿ ಪ್ರೋತ್ಸಾಹಿಸುವ ಪ್ರೇಕ್ಷಕ ಸಿನೆಮಾ ಬಿಡುಗಡೆಯಾದಾಗ ಯಾಕೆ ಈ ಮಟ್ಟದ ಪ್ರೋತ್ಸಾಹ ನೀಡಲಿಲ್ಲ ? ಕನ್ನಡ ಪ್ರೇಕ್ಷಕರ ಅರ್ಥವಾಗದ ಮನೋ ಧರ್ಮ !

No comments:

Post a Comment